ಯೌ ತೌ ಶಂಖ ಕಪಾಲ ಭೂಷಣಧರೌ ಹಾರಾಸ್ಥಿ ಮಾಲಾಧರೌ
ದೇವೌ ದ್ವಾರವತೀ ಸ್ಮಶಾನ ನಿಲಯೌ ನಾಗಾರಿ ಗೋವಾಹನೌ |
ದ್ವಿತ್ರ್ಯಕ್ಷೌ ಬಲಿ ದಕ್ಷಯಜ್ಞಮಥನೌ ಶ್ರೀಪಾರ್ವತೀ ವಲ್ಲಭೌ
ಪಾಪಂ ಮೇ ಹರತಾಂ ಜನಾರ್ಧನ ಹರೌ ಶ್ರೀವತ್ಸ ಗಂಗಾಧರೌ ||
ಶಂಖ ಹಾಗೂ ಕಪಾಲವನ್ನು ಅಲಂಕಾರವಾಗಿ ಧರಿಸಿಕೊಂಡು, ಪುಷ್ಪ ಮಾಲೆ ಮತ್ತು ಎಲುಬಿನ ಮಾಲೆಗಳನ್ನು ಧರಿಸಿಕೊಂಡು, ದ್ವಾರಕೆ ಮತ್ತು ಸ್ಮಶಾನದಲ್ಲಿ ನೆಲೆಯಾಗಿರುವ, ದ್ವಿನೇತ್ರನೂ ತ್ರಿನೇತ್ರನೂ ಆಗಿ, ಗರುಢ ಮತ್ತು ನಂದಿಯನ್ನು ವಾಹನವನ್ನಾಗಿಸಿ, ಬಲಿಯ ಯಜ್ಞ ಅಂತೆಯೇ ದಕ್ಷನ ಯಜ್ಞವನ್ನೂ ಭಂಗಗೊಳಿಸಿದ, ಶ್ರೀವತ್ಸ ಲಾಂಛನನೂ ಮತ್ತು ಭಾಗೀರಥಿಯನ್ನು ಧರಿಸಿದವರಾಗಿ ಲಕ್ಷ್ಮೀ ಪತಿಯೂ ಪಾರ್ವತೀಪತಿಯೂ ಆಗಿರುವ ದೇವರುಗಳಾದ ಶಂಕರ-ನಾರಾಯಣರು ನನ್ನ ಪಾಪಗಳನ್ನೆಲ್ಲಾ ಪರಿಹರಿಸಲಿ.
#ಹಾವೆಂದೀ_FB2017
Leave a Reply